`ಉದ್ಯೋಗ ಮಿತ್ರ ಚಾರಿಟಬಲ್ ಟ್ರಸ್ಟ್’ಗೆ ಚಾಲನೆ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್

ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳನ್ನು ಇಂದಿನ ಅಗತ್ಯತೆಗೆ ತಕ್ಕಂತೆ ಮೇಲ್ದರ್ಜೆಗೇರಿಸುವ ತುರ್ತು ಅಗತ್ಯವಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.

PHOTO 1
ಉದ್ಯೋಗ ಮಿತ್ರ ಚಾರಿಟೇಬಲ್ ಟ್ರಸ್ಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಮಿತ್ರದಂತಹ ಒಳ್ಳೆಯ ಕಾರ್ಯದ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಬಹಳ ಕೊಡುಗೆಯನ್ನು ನೀಡಿದೆ. ರಾಜ್ಯದಲ್ಲಿ ಅತ್ಯಂತ ಒಳ್ಳೆಯ ಮಾನವ ಸಂಪನ್ಮೂಲವಿದ್ದು, ಅದರ ಸದುಪಯೋಗ ಮಾಡಿಕೊಳ್ಳುವ ಅಗತ್ಯವಿದೆ. ಜ್ಞಾನವನ್ನು ಮೇಲ್ದರ್ಜೇಗೇರಿಸುವ ಅಗತ್ಯವಿದೆ. ಅದರಲ್ಲೂ ನಮ್ಮ ರಾಜ್ಯದ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಬಹಳಷ್ಟಿವೆ. ಇವುಗಳ ಸದುಪಯೋಗ ಮಾಡಿಕೊಳ್ಳಲು ನಮ್ಮ ಪಾಲಿಟೆಕ್ನಿಕ್ ಕಾಲೇಜುಗಳನ್ನು ಉನ್ನತ ದರ್ಜೆಗೆ ಏರಿಸುವ ಅಗತ್ಯವಿದೆ. ಇದಕ್ಕಾಗಿ ಅಗತ್ಯವಿರುವ ತಂತ್ರಜ್ಞಾನವನ್ನು ನೀಡಲು ಜೆರ್ಮನ್ ದೇಶ ಮುಂದಾಗಿದೆ ಎಂದರು.
ದೇಶದಲ್ಲಿ ಒಳ್ಳೆಯ ದರ್ಜೇಯ ಕಾರುಗಳು ತಯಾರಾಗುತ್ತಿವೆ. ಆದರೆ, ಅವುಗಳ ರಿಪೇರಿ ಕಾರ್ಯದಂತಹ ಕೆಲಸಗಳಿಗೆ ತರಬೇತಾದ ಮಾನವ ಸಂಪನ್ಮೂಲದ ಕೊರತೆ ಎದ್ದು ಕಾಣುತ್ತಿದೆ. ಇದರ ನಿವಾರಣೆಗೆ ಪಾಲಿಟೆಕ್ನಿಕ್ ಕಾಲೇಜುಗಳು ನೀಡುವ ಕೊಡುಗೆ ಅಪಾರ ಎಂದು ಉದಾಹರಣೆ ನೀಡಿದರು.

ಮುಂದುವರಿದ ದೇಶಗಳಾದ ಅಮೇರಿಕಾ, ಫ್ರಾನ್ಸ್‍ಗಳಲ್ಲಿ ಗ್ರಾಮೀಣ ಪ್ರದೇಶಗಳು ಬಹಳ ಅಭಿವೃದ್ದಿಯನ್ನು ಹೊಂದಿವೆ. ಆ ದೇಶಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಆದರೆ, ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ. ಆದ್ದರಿಂದ, ಬೆಂಗಳೂರಿನಂತಹ ನಗರಗಳು ತಮ್ಮ ಹೊಳಪನ್ನ ಕಳೆದುಕೊಳ್ಳುತ್ತಿವೆ ಎಂದು ವಿಷಾದವ್ಯಕ್ತಪಡಿಸಿದರು.
ಉದ್ಯೋಗ ಮಿತ್ರ ಚಾರಿಟೇಬಲ್ ಟ್ರಸ್ಟ್‍ನಂತಹ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಯುವಕರಿಗೆ ನೀಡುತ್ತಿರುವ ಪ್ರೋತ್ಸಾಹ ಬಹಳ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ತರಬೇತಿಯನ್ನು ನೀಡುವುದಲ್ಲದೆ, ಅಲ್ಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ಕೈಗೊಳ್ಳುತ್ತಿರುವುದ ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾನ್ಯ ಲೋಕಾಯುಕ್ತ ಭಾಸ್ಕರ್ ರಾವ್ ಮಾತನಾಡಿ, ಸಂವಹನ ಕೌಶಲ್ಯಗಳು ಪ್ರಸ್ತುತ ದಿನದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಶಿಕ್ಷಣ ಪೂರೈಸಿದ ನಂತರ ಎಲ್ಲರಿಗೂ ಎದುರಾಗುವ ಮೂಲಭೂತ ಪ್ರಶ್ನೆ ಉದ್ಯೋಗ. ಅದರಲ್ಲೂ ಗ್ರಾಮೀಣ ಹಿನ್ನಲೆಯುಳ್ಳ ವಿದ್ಯಾರ್ಥಿಗಳು ಇಂಗ್ಲಿಷ್ ನಂತಹ ಭಾಷೆಯ ಸಂವಹನ ಕೌಶಲ್ಯವಿಲ್ಲದೆ ಅವಕಾಶ ವಂಚಿತರಾಗುತ್ತಾರೆ. ಅಂತಹ ಯುವಕ ಯುವತಿಯರನ್ನು ಗುರುತಿಸಿ ಉಚಿತವಾಗಿ ತರಬೇತಿ, ಉಟ ಮತ್ತು ಸಾರಿಗೆ ಸೌಲಭ್ಯವನ್ನು ನೀಡುವ ಉದ್ಯೋಗ ಮಿತ್ರ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯ ಒಳ್ಳೆಯದು ಎಂದು ಶ್ಲಾಘಿಸಿದರು.

PHOTO 1
ಉದ್ದೇಶ
ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸೂಕ್ತ ತರಬೇತಿ ನೀಡುವುದು, ಉದ್ಯೋಗ ಅರಸಿ ಬರುವವರಿಗೆ ಊಟ-ವಸಿತಿ ಸೌಕರ್ಯ ಕಲ್ಪಿಸುವುದು ಹಾಗೂ ತದನಂತರ ಸೂಕ್ತ ಸಂಸ್ಥೆಗಳಲ್ಲಿ ಅಭ್ಯರ್ಥಿಗೆ ಸೂಕ್ತ ಉದ್ಯೋಗವನ್ನು ಒದಗಿಸುವಲ್ಲಿ ಶ್ರಮಿಸುವುದು ಟ್ರಸ್ಟ್‍ನ ಮೂಲ ಉದ್ದೇಶಗಳಲ್ಲಿ ಪ್ರಮುಖವಾದವು.

`ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಮಾತಿದೆ. ಆದರೆ `ಉದ್ಯೋಗ ಮಿತ್ರ ಚಾರಿಟಬಲ್ ಟ್ರಸ್ಟ್’ ಯಾವುದೇ ಲಿಂಗಭೇದವಿಲ್ಲದೆ, ಜಾತಿ-ಧರ್ಮಗಳ ಭೇದವಿಲ್ಲದೆ ಸರ್ವರಿಗೂ ಉದ್ಯೋಗ ಒದಗಿಸುವುದರಲ್ಲಿ ಶ್ರಮಿಸಲಿದೆ ಎನ್ನುತ್ತಾರೆ `ಉದ್ಯೋಗ ಚಾರಿಟಬಲ್ ಟ್ರಸ್ಟ್’ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಮನದೀಪ್ ಕೌರ್ ಹೇಳಿದರು.
ಶಿಕ್ಷಣ ಕ್ರಾಂತಿಯ ಫಲ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಉದ್ಯೋಗದ ಅವಕಾಶಗಳು ಲಭ್ಯವಿದ್ದರೂ ಸಂವಹನದ ಕೊರತೆ ಹಾಗೂ ವಿವಿಧ ಕಾರಣಗಳಿಂದಾಗಿ ಔದ್ಯೋಗಿಕ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಗ್ರಾಮೀಣ ಪ್ರದೇಶಗಳ ನಿರುದ್ಯೋಗಿ ಯುವಜನತೆ ಹಿಂದೆ ಬೀಳುತ್ತಿದ್ದಾರೆ. ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ರಂಗಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳನ್ನು ಅರ್ಹರಿಗೆ ತೆರೆದಿಡುವ ಕಾರ್ಯವನ್ನು `ಉದ್ಯೋಗ ಮಿತ್ರ ಚಾರಿಟಬಲ್ ಟ್ರಸ್ಟ್’ ಮಾಡಲಿದೆ ಎಂದು ಟ್ರಸ್ಟ್‍ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಮನದೀಪ್ ಕೌರ್ ಹೇಳಿದರು.
ಸಂರ್ದಶನ ಹಾಗೂ ತರಬೇತಿಗಾಗಿ ಬರುವವರಿಗೆ `ಉದ್ಯೋಗ ಮಿತ್ರ ಚಾರಿಟಬಲ್ ಟ್ರಸ್ಟ್’ ಉಚಿತ ಊಟ ಮತ್ತು ವಸತಿ ಸೌಕರ್ಯಗಳನ್ನು ಒದಗಿಸಲಿದೆ.

NEW LOGO WITH BLUE COLOUR 1

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s