ಮೌಲ್ಯಾಧಾರಿತ ಆಯುರ್ವೇದ ಚಿಕಿತ್ಸಾ ಪದ್ದತಿಯ ಲೊಟಸ್ ಆಯುರ್ ಕೇರ್ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

Photo 5

ಪ್ರಾಚೀನ ಆಯುರ್ವೇದ ಚಿಕಿತ್ಸೆಯ ಮಹತ್ವ ತಿಳಿಸುವ ಹಾಗೆಯೇ ಗುಣಮಟ್ಟದ ಚಿಕಿತ್ಸೆ ನೀಡುವ ದೃಷ್ಟಿಯಿಂದ ಪ್ರಾರಂಭವಾಗಿರುವ “ಲೊಟಸ್ ಆಯುರ್ ಕೇರ್ ಆಯುರ್ವೇದ ಆಸ್ಪತ್ರೆ” ಗೆ ಖ್ಯಾತ ಚಲನ ಚಿತ್ರನಟ ಕೊಮಲ್ ಕುಮಾರ್ ಇಂದು ಚಾಲನೆ ನೀಡಿದರು.

ಆರ್ ಟಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲೊಟಸ್ ಆಯುರ್ ಕೇರ್ ಆಯುರ್ವೇದ ಕ್ಲಿನಿಕ್‍ನ್ನು ಉದ್ಘಾಟಿಸಿ ಮಾತನಾಡಿದ ನಟ ಕೊಮಲ್, ಆಯುರ್ವೇದ ಎಂದರೆ ಕೇವಲ ಮಸಾಜ್ ಅಷ್ಟೇ ಎಂದುಕೊಳ್ಳುವ ಪರಿಸ್ಥಿತಿಯಿದೆ. ಈ ಮನೋಭಾವವನ್ನು ಹೋಗಲಾಡಿಸಿ, ಪ್ರಾಚೀನ ಆಯುರ್ವೇದದ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುವುದು ಲೊಟಸ್ ಆಯುರ್ ಕೇರ್ ನ ಉದ್ದೇಶ ಬಹಳ ಶ್ಲಾಘನೀಯ ಎಂದರು. ಈ ಚಿಕಿತ್ಸಾಲಯದಲ್ಲಿ ಸಾರ್ವಜನಿಕರು ಪ್ರಾಚೀನ ಪದ್ದತಿಯ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದರು. ಶುದ್ಧ ಆಯುರ್ವೇದ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿ. ಇದು ನನ್ನ ಸ್ವಂತ ಅನುಭವವಾಗಿದ್ದು, ಇಂತಹ ಉತ್ತಮ ಚಿಕಿತ್ಸಾ ಪದ್ದತಿಗಳು ಮುಂದಿನ ಪೀಳಿಗೆಗೂ ತಲುಪುವಂತಾಗಬೇಕು ಎಂದರು.

Photo 3
ಹೆಬ್ಬಾಳ ಶಾಸಕ ಆರ್ ಜಗದೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಕೇಂಡ್ ಮಸಾಜ್ ಪರಿಪಾಠ ಹೆಚ್ಚಾಗುತ್ತಿದೆ. ಆದರೆ, ನಿಜವಾದ ಪದ್ದತಿಯ ಹಾಗೂ ವೈದ್ಯರು ಶಿಫಾರಸ್ಸು ಮಾಡಿದ ಪಂಚಕರ್ಮ ಚಿಕಿತ್ಸೆಗೆ ಒಳಗಾಗುವವರು ತುಂಬಾ ಕಡಿಮೆ. ಇದನ್ನು ತಡೆಗಟ್ಟಿ ಆರೋಗ್ಯ ಸಮಸ್ಯೆಗಳಾದ ಆರ್ಥರೈಟೀಸ್, ಡಯಾಬಿಟಿಸ್, ಬೊಜ್ಜುತನ, ಬಂಜೆತನ, ಅಸಿಡಿಟಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೌಲ್ಯಾಧಾರಿತ ಆಯುರ್ವೇದ ಚಿಕಿತ್ಸೆಯನ್ನು ನೀಡುವುದಕ್ಕೆ ಮುಂದಾಗುತ್ತಿರುವುದು ಬಹಳ ಸಂತಸ ತಂದಿದೆ ಎಂದರು.

ಲೊಟಸ್ ಅಯುರ್ ಕೇರ್ ನ ಡಾ. ಶ್ವೇತ ಹೊನ್ನುಂಗರ ಮಾತನಾಡಿ, ಆಯುರ್ವೇದ ಚಿಕಿತ್ಸೆಗಳು ನಿಧಾನವಾಗಿ ಪರಿಣಾಮ ಬೀರುತ್ತವೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಜನರು ಆಯುರ್ವೇದ ಚಿಕಿತ್ಸೆಗೆ ಒಳಗಾಗುವುದಕ್ಕೆ ನಿಧಾನತೆಯನ್ನು ತೋರತ್ತಿರುವುದು ಮೂಲ ಸಮಸ್ಯೆಯಾಗಿದೆ. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಮೂಲಕ ಮೌಲ್ಯಾಧಾರಿತ ಹಾಗೂ ಶುದ್ದ ಆಯುರ್ವೇದ ಪದ್ದತಿಯನ್ನು ಪ್ರಚುರ ಪಡಿಸುವ ಮತ್ತು ಅದರ ಮೂಲಕ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದು ಲೊಟಸ್ ಅಯುರ್ ಕೇರ್ ನ ಉದ್ದೇಶವಾಗಿದೆ.

photo 2

ಆಯುರ್ವೇದ ಚಿಕಿತ್ಸೆಯು ಜಗತ್ತಿನ ಅತ್ಯಂತ ಪ್ರಾಚೀನ ಚಿಕಿತ್ಸಾ ಪದ್ದತಿಯಾಗಿದ್ದು, ಎಲ್ಲಾ ತರಹದ ಕಾಯಿಲೆಗಳಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. ಆಯುರ್ವೇದ ಚಿಕಿತ್ಸೆಯು ರೋಗ ಲಕ್ಷಣದ ಜೊತೆಗೆ ರೋಗದ ಮೂಲಕಾರಣ ಆಧರಿಸಿದೆ. ಅದ್ದರಿಂದ ಇದು ಸಂಪೂರ್ಣವಾಗಿ ಕಾಯಿಲೆಯನ್ನು ಗುಣಪಡಿಸುತ್ತದೆ. ನಮ್ಮಲ್ಲಿ ಮೊಡವೆ, ಬೊಜ್ಜುತನ, ಸಂಧಿವಾತ, ಬೆನ್ನುನೋವು, ಮಕ್ಕಳಲ್ಲಿ ಅಸ್ತಮಾ, ಬಂಜೆತನ, ಮುಟ್ಟಿನ ತೊಂದರೆಗಳು, ಪಿಸಿಓಡಿ, ಥೈರಾಯಿಡ್ ಸಮಸ್ಯೆ, ಕೂದಲು ಉದುರುವಿಕೆ ಮುಂತಾದವುಗಳಿಗೆ ವಿಶೇಷ ಚಿಕಿತ್ಸೆ ಲಭ್ಯವಿರುತ್ತದೆ ಎಂದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s