ನಟ ಶ್ರೀನಾಥ್, ಭಾರತೀ ವಿಷ್ಣುವರ್ಧನ್ ಸೇರಿದಂತೆ 8 ಜನ ಕಲಾವಿದರಿಗೆ ಸ್ಯಾನ್‍ಸಿಟಿ ಕಲಾರತ್ನ ಪ್ರಶಸ್ತಿ ಪ್ರಧಾನ

ಪ್ರಶಸ್ತಿ ಪುರಸ್ಕøತರಿಗೆ ಸ್ಯಾನ್ ಸಿಟಿ ಸೈಟ್ ನೀಡಿ ಗೌರವ

Group

ಕರ್ನಾಟಕ ರಾಜ್ಯದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿದ ಬಿ.ಎಸ್ ವಿಶ್ವಕಾರ್ಯಪ್ಪ ಅವರ ಸಾರಥ್ಯದ ಸಂಸ್ಥೆ ಸ್ಯಾನ್‍ಸಿಟಿ, ತನ್ನ 10 ನೇ ವರ್ಷದ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿತು.

ನಗರದ ಬಂಟರ ಸಂಘ ಸಭಾಂಗಣದಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ ಸ್ಯಾನ್‍ಸಿಟಿ ಗ್ರೂಪ್ ಆಫ್ ಕಂಪನೀಸ್ ವತಿಯಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಾಧನೆಗೈದ 8 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

photo 9d

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸ್ಯಾನ್‍ಸಿಟಿ ಗ್ರೂಪ್ ಆಫ್ ಕಂಪನೀಸ್‍ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್ ವಿಶ್ವ ಕಾರ್ಯಪ್ಪ ಮಾತನಾಡಿ, ಸ್ಯಾನ್‍ಸಿಟಿ ಕನ್ನಡಿಗರ ಜೊತೆ ಭಾಂಧವ್ಯವನ್ನು ಹಾಗೂ ವಿಶ್ವಾಸವನ್ನು ಉಳಿಸಿಕೊಂಡು ಬಂದಿರುವ ನಂಬಿಕಾರ್ಹ ರಿಯಲ್ ಎಸ್ಟೆಟ್ ಸಂಸ್ಥೆಯಾಗಿದೆ. ಇದೀಗ ಈ ಸಂಸ್ಥೆಯು ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನ್ಯಾಯಸಮ್ಮತ ಬೆಲೆಯಲ್ಲಿ ಅತ್ಯಂತ ವಿಶ್ವಾಸಾರ್ಹ ನಿವೇಶನಗಳನ್ನು ನೀಡುವ ಮೂಲಕ ಹೊಸ ಕ್ರಾಂತಿಯನ್ನು ಪ್ರಾರಂಭಿಸಿದ್ದು ಸ್ಯಾನ್‍ಸಿಟಿ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

photo 9a

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ವಿ ಸೋಮಣ್ಣ ಮಾತನಾಡಿ, ಸ್ಯಾನ್‍ಸಿಟಿ ಸಂಸ್ಥೆಯ ರೂವಾರಿಯಾದ ಬಿ.ಎಸ್ ವಿಶ್ವಕಾರ್ಯಪ್ಪ ಅವರು, ವರ್ಷದಿಂದ ವರ್ಷಕ್ಕೆ ಅನೇಕ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಕರ್ನಾಟಕದ ಬಹು ಜನಪ್ರಿಯ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಸ್ಯಾನ್‍ಸಿಟಿ ಸ್ವಂತ ಮನೆಯ ಕನಸು ಕಾಣುವವರ ಪಾಲಿಗೆ ಹೊಸ ಆಶಾಕಿರಣ ಎಂದರು. ಕನ್ನಡ ಚಿತ್ರರಂಗದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಕಲಾರತ್ನ ಪ್ರಶಸ್ತಿ ನೀಡುತ್ತಿರುವುದು ಸ್ವಾಗತಾರ್ಹ ವಿಷಯ. ಅದರಲ್ಲೂ ಅವರಿಗೆ ತಮ್ಮ ಸಂಸ್ಥೆಯ ವತಿಯಿಂದ ಸೈಟ್‍ಗಳನ್ನು ನೀಡುತ್ತಿರುವುದು ಇನ್ನೂ ಸಂತೋಷಯ ವಿಷಯ ಎಂದರು.

photo 5

ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಮಾತನಾಡಿ, ಸ್ಯಾನ್ ಸಿಟಿ ಸಂಸ್ಥೆ ಮೊದಲಿನಿಂದಲೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸೂರು ಕಟ್ಟಿಕೊಡುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಚಿತ್ರರಂಗದ ಜೊತೆಯಲ್ಲಿ ಪ್ಯಾರಾ ಓಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತರಿಗೂ ಇಂತಹ ಸನ್ಮಾನ ನೀಡುತ್ತಿರುವುದು ಸಂತೋಷದ ವಿಷಯ. ರಾಜ್ಯ ಸರಕಾರ ಮಾಡಬೇಕಾದ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿರುವುದು ಬಹಳ ಸ್ವಾಗತಾರ್ಹ ವಿಷಯ ಎಂದರು.

photo 9b

ಸ್ಯಾನ್‍ಸಿಟಿ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ. ಎಸ್ ವಿಶ್ವ ಕಾರ್ಯಪ್ಪ ಮಾತನಾಡಿ, ಇದೀಗ ಸ್ಯಾನ್‍ಸಿಟಿ ರಿಯಲ್ ಎಸ್ಟೇಟ್ ಉದ್ಯಮದ ಜೊತೆಗೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ. ಪ್ರಾಮಾಣಿಕ ಸೇವೆಯೇ ಯಶಸ್ಸಿನ ಮಂತ್ರ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಯಾನ್ ಸಿಟಿ ಸಂಸ್ಥೆ, ತನ್ನ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕಲಾರತ್ನ – 2015 ಕಾರ್ಯಕ್ರಮವನ್ನು ಆಯೋಜಿಸಿದೆ. ಕನ್ನಡಿಗರ ವಿಶ್ವಾಸಪಾತ್ರ ಸಂಸ್ಥೆ ಸ್ಯಾನ್‍ಸಿಟಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. ಇದು ಸ್ಯಾನ್ ಗ್ರೂಪ್ ಆಫ್ ಕಂಪನಿಸ್‍ನ ಹೊಸ ಮೈಲಿಗಲ್ಲು. ಈ ಸಂಭ್ರಮದ ದಿನವನ್ನು ಮತ್ತಷ್ಟು ಸ್ಮರಣೀಯ ಹಾಗೂ ಅರ್ಥಪೂರ್ಣವಾಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಎಂದರು.

photo 9d

ಕನ್ನಡ ಚಿತ್ರರಂಗದಲ್ಲಿ ಸಾಧನೆಗೈದ ಅಸಂಖ್ಯಾತ ಮಹನೀಯರಲ್ಲಿ 8 ಸಾಧಕರನ್ನು ಗುರುತಿಸಿ ಸ್ಯಾನ್‍ಸಿಟಿ ಕಲಾರತ್ನ – 2015 ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ ಪ್ಯಾರಾ ಓಲಂಪಿಕ್ ಬೆಳ್ಳಿ ಪದಕ ವಿಜೇತ ಶ್ರೀ ಗಿರೀಶ್ ನಾಗರಾಜ್ ಗೌಡ ಅವರಿಗೆ “ಸ್ಯಾನ್ ಸಿಟಿ ಕ್ರೀಡಾರತ್ನ – 2015” ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

photo 9b
ಕಲಾರತ್ನ ಪ್ರಶಸ್ತಿ ಪುರಸ್ಕøತರು:
1) ನಟ ಶ್ರೀನಾಥ್
2) ನಟಿ ಭಾರತಿ ವಿಷ್ಣುವರ್ಧನ್ – ಪರವಾಗಿ ಮಗಳು ಕೀರ್ತಿ ವಿಷ್ಣುವರ್ಧನ್
3) ನಾಗತೀಹಳ್ಳಿ ಚಂದ್ರಶೇಖರ್
4) ರಮೇಶ್ ಭಟ್
5) ಸುಧಾರಾಣಿ
6) ಟೆನ್ನಿಸ್ ಕೃಷ್ಣ
7) ಶ್ರೀ ಶೋಭರಾಜ್
8) ಶ್ರೀ ಗಿರೀಶ್ ನಾಗರಾಜ್ ಗೌಡ, ಬೆಳ್ಳಿ ಪದಕ ವಿಜೇತರು, ಪ್ಯಾರಾ ಓಲಂಪಿಕ್

photo 9c

10 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಮ್ಮ ಸಂಸ್ಥೆಯ 70 ಜನ ಉದ್ಯೋಗಿಗಳಿಗೆ ಉಚಿತವಾಗಿ ಸೈಟ್‍ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಈ ಬಾರಿಯ ಕಲಾರತ್ನ ಪುರಸ್ಕøತರಿಗೆ ತಲಾ ಒಂದು ಸೈಟ್‍ಗಳನ್ನು ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿ ಪುರಸ್ಕøತರು ನಮ್ಮ ಯಾವುದೇ ಪ್ರಾಜೆಕ್ಟ್‍ಗಳಲ್ಲಿ ಅವರಿಗೆ ಇಷ್ಟವಾಗುವ ಸೈಟಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ವಿಶ್ವ ಕಾರ್ಯಪ್ಪ ಅವರು ತಿಳಿಸಿದರು.

photo 6

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಶಂಕರ ಬಿದರಿ, ಖ್ಯಾತ ಉದ್ಯಮಿ ಜೆಮ್ಸಿ ಪೊನ್ನಪ್ಪ, ಪ್ರಗತಿ ಗ್ರೂಪ್ ಆಫ್ ಕಂಪನೀಸ್‍ನ ವ್ಯವಸ್ಥಾಪಕ ನಿರ್ದೇಶಕ ಯೋಗೀಶ್ ಹೆಚ್.ಎನ್ ಸೇರಿದಂತೆ, ಸಾವಿರಾರು ಗ್ರಾಹಕರು ಹಾಗೂ ಚಿತ್ರರಂಗದ ಪ್ರಮುಖ ನಟ ನಟಿಯರು ಪಾಲ್ಗೊಂಡಿದ್ದರು.

photo 7

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s