ಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಪಾರ್ಕ್

Photo 6

ಬೆಂಗಳೂರು, ಆ.20- ಸಿಲಿಕಾನ್ ಸಿಟಿ, ಉದ್ಯಾನನಗರಿಗೆ ಹಿರಿಮೆಗೆ ಮತ್ತೊಂದು ಗರಿಮೆ ಬಂದಿದೆ. ಸಾಮಾನ್ಯವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿರುವ ಸಸ್ಯ ತೋಟಗಳಿಗೆ ಉದ್ಯಾನವೆಂದು ಕರೆಯುತ್ತೇವೆ. ಆದರೆ, ಬಂಡೆಗಳ ಉದ್ಯಾನ ಬಂದರೆ ಹೇಗೆ? ಹೌದು ನಿಮಗೆ ಈ ಪ್ರಶ್ನೆ ಮೂಡದೇ ಇರಲಾರದು. ಇಂತಹದ್ದೊಂದು ಬಂಡೆ ಉದ್ಯಾನವನ ಉದ್ಯಾನನಗರಿಯಲ್ಲೇ ತಲೆ ಎತ್ತಿದೆ. ಇದು ದೇಶದ ಮೊದಲ ಬಂಡೆಗಳ ಉದ್ಯಾನವನ ಎಂದೇ ಖ್ಯಾತಿಗೊಳ್ಳಲಿದೆ.

_DSC0018
ಸಾರ್ವಜನಿಕರ ಬಗ್ಗೆ ಕಾಳಜಿ, ಅವರಿಗಾಗಿ ಕೆಲಸ ಮಾಡಬೇಕೆಂಬ ಹಪಾಹಪಿತನ ಜನಪ್ರತಿನಿಧಿಗಳಲ್ಲಿದ್ದರೆ ಕಲ್ಲೂ ಕೂಡ ಮಾತನಾಡಬಲ್ಲದು ಎಂಬ ಮಾತಿಗೆ ಈ ಬಂಡೆ ಉದ್ಯಾನವನ ಧ್ಯೋತಕವಾಗಿ ನಿಂತಿದೆ. ಅಂದಹಾಗೆ ಈ ಬಂಡೆ ಉದ್ಯಾನವನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ವಾರ್ಡಿನ ದೇವರ ಚಿಕ್ಕನಹಳ್ಳಿಯಲ್ಲಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

_DSC0078

ಪಾಲಿಕೆ ಸದಸ್ಯ ರಾಮ ಮೋಹನ್‍ರಾಜು.ಸಿ.ಆರ್. ಅವರು ತೆಗೆದುಕೊಂಡ ಆಸ್ಥೆಯಿಂದಾಗಿ ಈ ಬಂಡೆ ಉದ್ಯಾನವನ ನಿರ್ಮಾಣವಾಗಲು ಕಾರಣವಾಗಿದೆ.

_DSC0166
ಈಗ್ಗೆ ನಾಲ್ಕು ತಿಂಗಳ ಹಿಂದೆ ದೇವರಚಿಕ್ಕನಹಳ್ಳಿಯಲ್ಲಿನ ಈ ಒಂದೂವರೆ ಎಕರೆ ಜಾಗ ಕಸದ ರಾಶಿಯ ಕೇಂದ್ರ ಸ್ಥಾನ ಮತ್ತು ಹಾವು, ಹುಳ ಹುಪ್ಪಡಿಗಳ ಆವಾಸಸ್ಥಾನವಾಗಿತ್ತು. ಇಲ್ಲಿನ ಗಬ್ಬು ವಾಸನೆ ತಡೆಯಲಾರದೇ ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದರು. ಈ ದುಸ್ಥಿತಿಯನ್ನು ಕಂಡು ಎಲ್ಲರೂ ದೂಷಿಸುವಂತಾಗಿತ್ತು.

_DSC0150

ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೊಂದು ಪರಿಹಾರ ಕಂಡುಹಿಡಿಯಬೇಕೆಂದು ಯೋಚಿಸುತ್ತಿದ್ದ ಮೋಹನ್‍ರಾಜು ಸಿ.ಆರ್. ಅವರಿಗೆ ಹತ್ತಾರು ಯೋಜನೆಗಳು ನೆನಪಾದವು. ಆ ಯೋಜನೆಗಳ ಪೈಕಿ ಈ ಬಂಡೆ ಉದ್ಯಾನವನವೂ ಒಂದಾಗಿತ್ತು. ಆದರೆ, ಇದಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲಂತಹವರನ್ನು ಹುಡುಕುವುದು ಹೇಗೆ ಎಂಬುದನ್ನೂ ಚಿಂತಿಸಿದರು. ಮಾಡಿದರೆ ದೇಶದಲ್ಲೇ ಅಪರೂಪವಾದ ಮತ್ತು ಮೊದಲು ಎನ್ನುವಂತಹ ಯೋಜನೆಯನ್ನು ಮಾಡಬೇಕೆಂದು ಗಂಭೀರ ಆಲೋಚನೆ ಮಾಡಿದರು.

_DSC0100

ಆಗಲೇ, ಈ ಬಂಡೆ ಉದ್ಯಾನವನದ ಪರಿಕಲ್ಪನೆ ಅವರ ತಲೆಗೆ ಹೋಗಿ ಬಂಡೆ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದರು. ಕಳೆದ ನಾಲ್ಕು ತಿಂಗಳಿಂದ ಈ ಉದ್ಯಾನವನ ನಿರ್ಮಾಣ ಕಾಮಗಾರಿ ನಡೆದು ಇದೀಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.

_DSC0096

ಉದ್ಯಾನವನದಲ್ಲಿ ಏನೆಲ್ಲಾ ಇದೆ?

ಇಲ್ಲಿನ ವಿಶೇಷವೆಂದರೆ ಒಂದೂವರೆ ಎಕರೆಜಾಗದಲ್ಲಿ ಕೇವಲ ಬಂಡೆಗಳಿಂದಲೇ ಉದ್ಯಾನವನವನ್ನು ನಿರ್ಮಿಸಲಾಗಿದೆ.ಬಂಡೆ ಉದ್ಯಾನವನ ಎಂದಾಕ್ಷಣ ಇಲ್ಲಿ ಗಿಡ ಮರಗಳು ಇಲ್ಲವೆಂದಿಲ್ಲ. ಹಚ್ಚ ಹಸಿರಿನ ಗಿಡಮರಗಳನ್ನೂ ಇಲ್ಲಿ ಬೆಳೆಸಲಾಗಿದೆ. ವಿಶೇಷವಾಗಿ ಮಹಾಬಲಿಪುರದಿಂದ ಕಪ್ಪು ಕಲ್ಲುಗಳನ್ನು ತಂದು ನಿರ್ಮಾಣ ಮಾಡಲಾಗಿದೆ.ಆರಂಭದಲ್ಲಿ ಬಿಬಿಎಂಪಿ ಲೋಗೋ ಇರುವ ಬಂಡೆ ಎಲ್ಲರನ್ನೂ ಸ್ವಾಗತಿಸಲಿದೆ.ಬುದ್ಧನ ಪ್ರತಿಕೃತಿ, ಮಕ್ಕಳಿಗೆ ಮುದ ನೀಡುವ ಹತ್ತು ಹಲವಾರು ಪ್ರಾಣಿಗಳ ಪ್ರತಿಕೃತಿಗಳು ಇಲ್ಲಿವೆ.ಇದಿಷ್ಟೇ ಅಲ್ಲ. ದೇಶದ ಬೆನ್ನೆಲುಬು ರೈತರು ವ್ಯವಸಾಯಕ್ಕೆ ಬಳಸುವ ಹಲವಾರು ಉಪಕರಣಗಳು ಇಲ್ಲಿ ಕಾಣಸಿಗುತ್ತವೆ.

_DSC0085
ಸಂಜೆ ಆಗುತ್ತಿದ್ದಂತೆಯೇ ಪ್ರತಿಯೊಂದು ಬಂಡೆಯೂ ಕಣ್ಣಿಗೆ ಕೋರೈಸುವ ವಿದ್ಯುದ್ದೀಪದಿಂದ ಮತ್ತಷ್ಟು ಆಕರ್ಷಣೀಯವಾಗಿ ಕಾಣಲಿದೆ.

ವಿಧಾನಸೌಧದಲ್ಲಿ ಅಳವಡಿಸಿರುವಂತಹ 12 ಅಡಿ ಎತ್ತರದ ಆರ್ನಮೆಂಟಲ್ ಫೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ದೇಶದ ಮೊದಲ ಬಂಡೆ ಉದ್ಯಾನವನ ನಿನ್ನೆ ಸಂಜೆ ಲೋಕಾರ್ಪಣೆಗೊಂಡಿತು. ಕೇಂದ್ರ ಸಚಿವ ಅನಂತ್‍ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಶಾಸಕ ಸತೀಶ್ ರೆಡ್ಡಿ, ಮೇಯರ್ ಪದ್ಮಾವತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Photo 2

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s