ಮಕ್ಕಳನ್ನು ಆಕರ್ಷಿಸುವಂತಹ ಸರಕಾರಿ ಶಾಲೆಗಳ ನಿರ್ಮಾಣಕ್ಕೆ ಚಿಂತನೆ: ಶಿಕ್ಷಣ ಸಚಿವ ಜಿ ಟಿ ದೇವೇಗೌಡ

ಮಕ್ಕಳೊಂದಿಗೆ ನಲಿದ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ

ಬೆಂಗಳೂರು, ಜುಲೈ 06, 2018: ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸರಕಾರಿ ಶಾಲೆಗಳ Photo 1ನಿರ್ಮಾಣಕ್ಕೆ ಚಿಂತನೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದರು.

ನಗರದ ಹೆಚ್ ಬಿ ಆರ್ ಲೇಔಟನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಆರ್ಫಾ ಟೈನಿ ಟಾಟ್ಸ್ ಮಾಂಟೆಸ್ಸರಿ ಶಾಲೆಯನ್ನು ಚಿಕ್ಕಮಕ್ಕಳೊಂದಿಗೆ ಜೊತೆಗೂಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆರ್ಫಾ ಟೈನಿ ಟಾಟ್ಸ್ ನಲ್ಲಿ ಚಿಕ್ಕ ಮಕ್ಕಳಿಗೆ ಪರಿಸರ, ಸಂಸ್ಕøತಿ ಹಾಗೂ ಓಳ್ಳೆಯ ನಡವಳಿಕೆಗಳನ್ನು ಕಲಿಸುವ ಮೂಲಕ ಮಕ್ಕಳ ಶ್ರೇಯೋಭಿವೃದ್ದಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. Photo 3ತಾವು ಕಲಿಯುವ ಪರಿಸರದಲ್ಲಿ, ಪರಿಸರವನ್ನು ರಕ್ಷಿಸುವ ಹಾಗೂ ಪ್ರೀತಿಸುವ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸುತ್ತಿರುವುದು ಅನುಕರಣೀಯ ಅಂಶ.

ಈ ಶಾಲೆಯಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಲವಲವಿಕೆಯಿಂದ ಇರುವುದನ್ನ ನೋಡಿದಲ್ಲಿ ಬಹಳ ಸಂತಸವಾಗುತ್ತದೆ. ಇದೇ ಮಾದರಿಯ ಮಕ್ಕಳನ್ನು ಆಕರ್ಷಿಸುವಂತಹ ಮಟ್ಟಕ್ಕೆ ಸರಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಬೇಕಾಗಿದೆ. ಅಲ್ಲದೆ, ಈಗಾಗಲೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ನಲ್ಲಿ ನೀಡಿರುವ ಭರವಸೆಯಂತೆ, ಸರಕಾರಿ ಶಾಲೆಗಳಲ್ಲಿ ಶಿಶು ವಿಹಾರ ಮತ್ತು ಎಲ್ ಕೆ ಜಿ ಶಿಕ್ಷಣ ಪ್ರಾರಂಭಕ್ಕೆ ಮುಂದಾಗಿದ್ದೇವೆ. ಆಯಾ ಶಾಲೆಗಳಲ್ಲಿ ಇಲ್ಲಿರುವಂತಹ ಮೂಲಭೂತ ಸೌಕರ್ಯಗಳನ್ನು ಆಳವಡಿಸುವ ಬಗ್ಗೆ ಸಿಎಂ ಗಮನ ಸೆಳೆಯುವುದಾಗಿ ಹೇಳಿದರು.

ಮಕ್ಕಳಲ್ಲಿ ಬಾಲ್ಯದಲ್ಲಿಯೇ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿದಲ್ಲಿ, ಮುಂದಿನ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾರೆ. Photo 4ಆ ಮೂಲಕ ಪರಿಸರ ಉಳಿಸಲು ಕೊಡುಗೆಯನ್ನು ನೀಡುತ್ತಾರೆ ಎಂದರು.

ಆರ್ಫಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಟೈನಿ ಟಾಟ್ಸ್ ನ ಸಿಇಓ ಯಾಸಿನ್ ಪಾಷಾ ಮಾತನಾಡಿ, ಮೋರ್ಗೆನಲ್ ಹೋಲ್ಡಿಂಗ್ಸ್ ನ ಅಡಿಯಲ್ಲಿ ಐಟಿ, ವೈದ್ಯಕೀಯ ಕ್ಷೇತ್ರ, ಮಾನವ ಸಂಪನ್ಮೂಲ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೇವೆ. Photo 7ಆರ್ಫಾ ಟೈನಿ ಟಾಟ್ಸ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ನಾವು ಕಾಲಿಡುತ್ತಿದ್ದು, ಬಹಳ ಸಂತಸದ ವಿಷಯ. ಇದು ನಮ್ಮ ಕನಸಿನ ಯೋಜನೆಯಾದ ಆರ್ಫಾ ಇಂಟರ್ ನ್ಯಾಷನಲ್ ಸ್ಕೂಲ್ ನ ಕಡೆ ಮೊದಲ ಹೆಜ್ಜೆಯಾಗಿದೆ ಎಂದರು.

ನಗರದ ಮಾಂಟೆಸ್ಸರಿ ಶಿಕ್ಷಣ ಪದ್ದತಿಯಲ್ಲಿ ಆರ್ಫಾ ಟೈನಿ ಟಾಟ್ಸ್ ಬಹಳ ಕಡಿಮೆ ಸಮಯದಲ್ಲಿಯೇ ಪ್ರಮಖ ಸ್ಥಾನಕ್ಕೇರಲಿದೆ. ನಾವು ನಮ್ಮ ಶಿಕ್ಷಣ ಪದ್ದತಿಯಲ್ಲಿ ಸಂಸ್ಕøತಿ, ಸ್ವಚ್ಚತೆ, ಆರೋಗ್ಯ ಮತ್ತು ನೈತಿಕ ಅಂಶಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಮಕ್ಕಳ ವೈಯಕ್ತಿಕ ಕಲಿಕಾ ಮಟ್ಟದ ಬಗ್ಗೆ ವಿಶೇಷ ಗಮನ ನೀಡಲಿರುವ ನಮ್ಮ ಶಿಕ್ಷಣ ಪದ್ದತಿ, ಉರು ಹೊಡೆಯುವುದನ್ನು ಬಿಟ್ಟು ಮಕ್ಕಳಲ್ಲಿ ಅರ್ಥಮಾಡಿಕೊಳ್ಳುವ, ಆಲೋಚಿಸುವ ಹಾಗೂ ರಚಿಸುವ ಅಂಶಗಳಿಗೆ ಒತ್ತು ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ Photo 9ಸದಸ್ಯ ಎ.ಆರ್ ಝಾಕಿರ್, ಸದಸ್ಯೆ ರಾಧಮ್ಮ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಸಿ ನೆಡುವ ಸಮಯದಲ್ಲಿ ಚಿಕ್ಕಮಕ್ಕಳಲ್ಲಿ ಮಂದಹಾಸ ಎಲ್ಲರ ಗಮನ ಸೆಳೆಯಿತು.

Advertisements